ವಿವೇಕ್ ತೇಜ ಓರ್ವ ಭಾರತೀಯ ಕರಾಟೆ ಪಟು. ಇವರು ಎರಡು ಬಾರಿ ಯು.ಎಸ್. ಒಪನ್ ಸ್ಪರ್ಧೆ ಹಾಗೂ ೨೦೧೬ ವಿಶ್ವ ಸಮರ ಕಲೆಗಳ ಚಾಂಪಿಯನ್‌ಶಿಪನ್ನು ಗೆದ್ದಿದ್ದಾರೆ. ೨೦೧೮ ಕಾಮನ್ವೆಲ್ತ್ ಆಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಇವರು, ೭ ಬಗೆಯ ಸಮರ ಕಲೆಗಳಲ್ಲಿ ತಜ್ಞರಾಗಿದ್ದಾರೆ (ಕರಾಟೆ, ಕಿಕ್ ಬಾಕ್ಸಿಂಗ್, ಬಾಕ್ಸಿಂಗ್, ಮುಯೆ ಥಾಯ್, ಕಲರಿಪಯಟ್ಟು, ಸಿಲಾಂಬಮ್ ಮತ್ತು ಟೇಕ್ವಾಂಡೋ). ವಿವೇಕ್ ತೇಜ ಮೂಲತಹ ತೆಲಂಗಾಣ ರಾಜ್ಯದ ನಲ್ಗೊಂಡ ಊರಿನವರು. ಇವರು ೮ ವಯಸ್ಸಿನಲ್ಲಿ ಕರಾಟೆ ಅಭ್ಯಾಸ ಪ್ರಾರಂಭಿಸಿದರು ಮತ್ತು ಖ್ಯಾತ ತರಬೇತುದಾರ ಜುಡ್ ರೀಡ್ ನವರಿಂದ ತರಬೇತಿ ಪಡೆದರು. ಇವರು ವೆಂಕಟೇಶ್, ರಾಣಾ ದಗ್ಗುಬತಿ ಮುಂತಾದಂತಹ ತೆಲುಗು ನಟರಿಗೆ ಸಮರ ಕಲೆಗಳ ತರಬೇತಿ ನೀಡಿ, ತಮ್ಮ ಅಭ್ಯಾಸದ ಖರ್ಚನ್ನು ತೀರಿಸಿದರು. == ಉಲ್ಲೇಖಗಳು ==